ನನ್ನ ಅಜ್ಜನ ಮನೆಯ ಮೆತ್ತಿಯ ಮೇಲೊಂದು ಕೋಣೆಯಿದೆ. ತುಂಬಾ ದೊಡ್ಡದಲ್ಲದ, medium size ಕೋಣೆ. ಅದಕ್ಕಿರೋದು ಒಂದೇ ದೊಡ್ಡ ಕಿಟಕಿ. ಆ ಕಿಟಕಿಯ ಪಕ್ಕ ಕೂತ್ಕೊಂಡ್ರೆ ಕಾಣಿಸೋದು ಅಜ್ಜನ ಮನೆಯ ಅಡಕೆ ತೋಟ....
ನಾನು ಚಿಕ್ಕವಳಿದ್ದಾಗ ಅದು ಮಾವನ ಕೋಣೆಯಾಗಿತ್ತು .ಅವನು ಇಲ್ಲದ ಸಮಯ ನೋಡಿ , ನಾನು ಮತ್ತು ನನ್ನ ಚಿಕ್ಕಮ್ಮನ ಮಕ್ಕಳು ಅವನ ಕೋಣೆಗೆ ಹೋಗ್ತಾ ಇದ್ದ್ವಿ . ಅಲ್ಲಿ ಬಿದ್ದಿರುವ ರಾಶಿ ರಾಶಿ pen ಗಳು ಮತ್ತು ಅವನ ಪುಸ್ತಕಗಳ ಬಗ್ಗೆ ಅದೇನೋ ಒಂಥರಾ ಕುತೂಹಲ. ಮಾವನ ಮದುವೆಯ ನಂತರ ಆ ಕೋಣೆಗೆ ಅಜ್ಜ, ಅಜ್ಜಿ shift ಆದರು. ಅಜ್ಜಿಗೆ ಕಾಲು ನೋವಾದ್ದರಿಂದ ಆಕೆ ಆ ಕೋಣೆಗೆ ಬರೋದು ದಿನ್ನಕ್ಕೆ ಒಂದು ಸಲ ಮಾತ್ರ . ಹಾಗಾಗಿ ರಜೆಯಲ್ಲಿ ಆ ಕೋಣೆ ನಮ್ಮದೇ. ಅಜ್ಜಿಯ trunk ನಲ್ಲಿದ್ದ ತರಹ ತರಹದ ಸೀರೆಯನ್ನೆಲ್ಲಾ ತೆಗೆದು ನಾವು "ರಾಜಕುಮಾರಿ ಆಟ" ಆಡಿದ್ದು, ಎಲ್ಲಾ ಇನ್ನೂ ಚೆನ್ನಾಗಿ ನೆನಪಿದೆ. ಆ ಮೆತ್ತನೆಯ cotton ಸೀರೆಗಳ ಜೊತೆ ಆಟ ಆಡುವುದೇ ಒಂಥರಾ ಮಜಾ.
ನಾನು ಓದಲು ನಾಲ್ಕು ವರ್ಷ ಸಾಗರದಲ್ಲಿದ್ದೆ. ಆಗ ವಾರಕ್ಕೊಮ್ಮೆ ಅಜ್ಜನ ಮನೆಗೆ ಹೋಗುತ್ತಿದ್ದೆ . ಆಗ ನಾನು ಹೆಚ್ಚಿನ ಸಮಯ ಕಳೆದಿದ್ದು ಆ ಕೋಣೆಯಲ್ಲೇ . ಮಾವನ ಮಗು ಶ್ರಿಚರಣನ ಜೊತೆ ಆಟ ಆಡಿದ್ದು , ಅವನ ಪುಟ್ಟ ಕೈ ಹಿಡಿದು, ಅವನನ್ನು ತಬ್ಬಿ ತಾಸುಗಟ್ಟಲೆ ಮಲಗಿದ್ದು, ಅವನ ಮೊದಲ ತೊದಲು ನುಡಿಗಳನ್ನು ಕೇಳಿ ಆನಂದಿಸಿದ್ದು , ಅದನ್ನು ಅಮ್ಮನಿಗೆ ಕೇಳಿಸಲು ಮೊಬೈಲ್ ನಲ್ಲಿ record ಮಾಡಿದ್ದು,.... ಎಲ್ಲಾ ಆ ಕೋಣೆಯಲ್ಲೇ...
ಓದಿದ್ದು , notes ತೆಗೆದಿದ್ದು , ಗೆಳತಿಗೆ ಪತ್ರ ಬರೆದಿದ್ದು, cousins ಜೊತೆ ಹರಟಿದ್ದು , ಅಜ್ಜಿಯ ಜೊತೆ ಕತೆ ಕೇಳುತ್ತಾ ಮಲಗಿದ್ದು...ಇಷ್ಟವಾದ ಹಾಡನ್ನು ತಾಸುಗಟ್ಟಲೆ ಗುನುಗಿದ್ದು, ಹಗಲುಗನಸು ಕಂಡಿದ್ದು, ಹಾಗೆ ಒಬ್ಬಳೇ ಮುಗುಳು ನಗೆ ನಕ್ಕಿದ್ದು...
ಹೀಗೆ ಆ ಕೋಣೆಯಲ್ಲಿ ನಾನು ಕಳೆದ ಅವೆಷ್ಟೋ ಸುಂದರ ಕ್ಷಣಗಳು... ಅವೆಲ್ಲಾ ನಿನ್ನೆ, ಮೊನ್ನೆಯೇನೂ ಅನ್ನಿಸುವಷ್ಟು ನೆನಪಿನಲ್ಲಿ ಹಸಿರಾಗಿವೆ...
ಆ ಕೋಣೆಯಲ್ಲಿದ್ದರೆ, ಅದೇನೋ ಒಂಥರಾ secured feeling ಇರ್ತಿತ್ತು. ಇಡೀ ಮನೆಯವರೆಲ್ಲಾ ಕೆಳಗೆ ಹರಟುತಿದ್ದರೆ, ನಾನೊಬ್ಬಳೆ ಅವೆಷ್ಟೋ ರಾತ್ರಿ ಅಲ್ಲಿ ಒಬ್ಬಳೇ ಕುಳಿತಿರುತಿದ್ದೆ. ನನ್ನ ಜೊತೆಗೆ ನಾನು ಅವೆಷ್ಟೋ ಸಮಯ ಕಳೆದಿದ್ದೇನೆ. ಅಲ್ಲಿ ಒಂದು eternal solitude ಸಿಗುತ್ತಿತ್ತು.
T.V ಯಲ್ಲಿ "My Autograph " ಸಿನಿಮಾ ನೋಡಿ, ಮೇಲೆ ಬಂದು ಅತ್ತಾಗ, ಅಜ್ಜನ ಜೊತೆ ಜಗಳ ಮಾಡಿ ಮುನಿಸಿಕೊಂಡಾಗ, ಅಕ್ಕ ಬರೆದ ಪತ್ರವನ್ನು ಒಂದೇ ಉಸಿರಿನಲ್ಲಿ ಓದಿದಾಗ, ಅಪ್ಪ ಅಮ್ಮನ ನೆನಪಾಗಿ ಒಬ್ಬಳೇ ಬಿಕ್ಕಳಿಸಿದಾಗ, ರಾತ್ರಿ ಕೆಟ್ಟ ಕನಸು ಕಂಡು ಬೆಚ್ಚಿದಾಗ.... ನನ್ನ ಜೊತೆಯಲ್ಲಿದ್ದುದು ಅದೇ ಕೋಣೆ, ಅದರ ನಾಲ್ಕು ಗೋಡೆಗಳು ಮತ್ತು ಆ ಕಿಟಕಿ......
ನನ್ನ ಅವೆಷ್ಟೋ guilt, confessions ,ಪಶ್ಚಾತ್ತಾಪ, ಕಣ್ಣೀರು, ಗೊಂದಲ ಹಾಗು ಜ್ಞಾನೋದಯಗಳಿಗೆಲ್ಲಾ ಆ ಕೋಣೆ ಸಾಕ್ಷಿಯಾಗಿದೆ.... ಅಲ್ಲಿ ಕಳೆದ ಎಷ್ಟೋ ಕ್ಷಣಗಳು ಮನದಾಳದಲ್ಲಿ ಹಾಗೆ ಮಾಸದೆ ಉಳಿದುಬಿಟ್ಟಿವೆ...
ಎರಡು ವರ್ಷವಾಯಿತು, ಅಜ್ಜನ ಮನೆಗೆ ಹೋಗದೆ.... ಯಾಕೋ ಆ ಕೋಣೆಯ ನೆನಪು ಕಾಡುತ್ತಿದೆ....